‘ವನಮಹೋತ್ಸವ ಪರಿಸರ ಸಂರಕ್ಷಣೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’
‘ವನಮಹೋತ್ಸವ ಪರಿಸರ ಸಂರಕ್ಷಣೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’
ಧಾರವಾಡ 20: ವನಮಹೋತ್ಸವವು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಲಯನ್ಸ್ ವಿಶ್ರಾಂತ ಗವರ್ನರ್ ಹರ್ಷ ದೇಸಾಯಿ ಹೇಳಿದರು.
‘ಧಾರವಾಡ ಲಯನ್ಸ್ ಸಂಸ್ಥೆಯು ಹಮ್ಮಿಕೊಂಡ ಗಿರಿನಗರದ ಶೀಲಾ ಕೊಪ್ಪಿಕರ ವಿದ್ಯಾ ಮಂದಿರ ಕಟ್ಟಡದ ಆವರಣದಲ್ಲಿ ಸಸಿಯನ್ನು ನೆಟ್ಟು ಮಾತನಾಡಿ, ನಾವು ನಮ್ಮ ಪರಿಸರವನ್ನು ರಕ್ಷಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸಬಹುದು ಎಂದು ಹೇಳಿದರು.
‘ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಅಧ್ಯಕ್ಷತೆ ವಹಿಸಿದ್ದರು. ಆವರಣದಲ್ಲಿ 25 ಸಸಿಗಳನ್ನು ನೆಡಲಾಯಿತು.
‘ವಲಯ ಅಧ್ಯಕ್ಷೆ ಶೈಲಾ ಕರಗುದರಿ, ಆನಂದ ಕಮಲಾಪುರ, ಹರ್ಷ ಡಂಬಳ, ಡಾ.ಕೆ.ವಿ.ಅಚ್ಯುತ,ಗುರುರಾಜ ಪಿಸೆ,ಉಷ್ಮಾ ದೇಸಾಯಿ, ಆರತಿ ಕಮಲಾಪುರ, ನಂದಿನಿ ಬಾಗಿ,ಶುಭದಾ ಮುಧೋಳಕರ,ಶಿಲ್ಪಾ ಪಿಸೆ, ರಶ್ಮೀ ಭಾರದ್ವಾಜ್, ಉಷಾ ಗದ್ದಗಿಮಠ, ಡಾ. ಶ್ರೇಯಾ ಪಾಸ್ತೆ, ನಮ್ರತಾ ಪಾಟೀಲ, ಡಾ.ಅನಿರುಧ್ ಕುಲಕರ್ಣಿ ಇತರರು ಹಾಜರಿದ್ದರು.
‘ಕಾರ್ಯದರ್ಶಿ ಸುರೇಶ ಗುದಗನವರ ಸ್ವಾಗತಿಸಿದರು. ರಾಜಶ್ರೀ ಗುದಗನವರ ನಿರೂಪಿಸಿದರು. ಖಜಾಂಚಿ ಶ್ರೀಕಾಂತ ದೇವಗಿರಿ ವಂದಿಸಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 